ಇರಾನ್ ಹಾಗು ಇರಾಕ್ ಭೀಕರ ಭೂಕಂಪ | ವೀಡಿಯೋ ವೈರಲ್ | Oneindia Kannada

2017-11-13 10

A massive earthquake of magnitude 7.3 struck Iraq and iran on Nov 12th, More than 130 people died. Here are viral videos of the earthquake on twitter.

ವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯ. ಇರಾನ್ ಮತ್ತು ಇರಾಕ್ ಗಡಿಯಲ್ಲಿ ನ.12 ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ 130 ಜನ ಮೃತರಾಗಿದ್ದು, ಸಾವಿರಾರು ಜನ ಗಂಭೀರ ಗಾಯಗೊಂಡಿದ್ದಾರೆ.ರಿಕ್ಟರ್ ಮಾಪನದಲ್ಲಿ 7.3 ತೀವ್ರತೆ ದಾಖಲಾಗಿದ್ದು, ಇತ್ತೀಚೆಗೆ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ. ಬರ್ತಡೇ ಆಚರಿಸುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಭುಕಂಪದ ಸುಳಿಯಲ್ಲಿ ಸಿಕ್ಕಿ ನರಳಿದ್ದು, ಕಾಫಿ ಶಾಪ್ ನಲ್ಲಿ ವಿರಾಮದಲ್ಲಿ ಕುಳಿತವರೆಲ್ಲ ಇದ್ದಕ್ಕಿದ್ದಂತೆ ಸಂಭವಿಸಿದ ಭೂಕಂಪಕ್ಕೆ ನಲುಗಿಹೋಗಿದ್ದು, ರಿಟೇಲ್ ಶಾಪ್ ವೊಂದರಲ್ಲಿ ಒಪ್ಪವಾಗಿಟ್ಟಿದ್ದ ಸಾಮಗ್ರಿಗಳೆಲ್ಲ ಪಟಪಟನೇ ಉದುರಿಬಿದ್ದಿದ್ದು, ಮಾಲ್ ನಲ್ಲಿದ್ದ ಜನರೆಲ್ಲ ಪ್ರಾಣ ಉಳಿಸಿಕೊಳ್ಳೋದಕ್ಕಾಗಿ ಎದ್ದೆನೋ, ಬಿದ್ದೆನೋ ಎಂದು ಓಟಕಿತ್ತಿದ್ದು... ಇಂಥ ಹಲವು ವಿಡಿಯೋಗಳು ಇರಾನ್-ಇರಾಕ್ ಭೂಕಂಪದ ತೀವ್ರತೆಯನ್ನು ತೋರಿಸಿಕೊಟ್ಟಿವೆ.ಟ್ವಿಟ್ಟರ್ ನಲ್ಲೂ ಈ ವಿಡಿಯೋಗಳು ವೈರಲ್ ಆಗಿ ಹರಿದಾಡುತ್ತಿವೆ. ಭೀಕರ ಭೂಕಂಪಕ್ಕೆ ಬಂಧುಗಳನ್ನು ಕಳೆದುಕೊಂಡು ಅನಾಥರಾದ, ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಯಲ್ಲಿ ನಿಂತ ಹಲವರ ಚಿತ್ರಗಳು ಕಣ್ಣೆವೆಗಳನ್ನು ತುಂಬಿಸುತ್ತವೆ.



Videos similaires